Monday, December 2, 2019

Kaaneyaagiruve Naanu Kannada Song/ಕಾಣೆಯಾಗಿರುವೆ ನಾನೂ






ಚಿತ್ರ       : ಒಡೆಯ
ಸಂಗೀತ : ಅರ್ಜುನ ಜನ್ಯ
ಸಾಹಿತ್ಯ : ಜಯಂತ್ ಕಾಯ್ಕಿಣಿ 


ಕಾಣೆಯಾಗಿರುವೆ ನಾನೂ, ಎದುರಲಿ ಕಾಣುತಿರುವಾಗ ನೀನು..
ಗಾಯಕೆ ಕುಡಿನೋಟ ಸಾಕು, ಮಾಯಿಸೋ ಒಡನಾಟ ಬೇಕು ,
ಮಾತಾಡುವ ದೇವರು ನೀನು..!

ಕಾಣೆಯಾಗಿರುವೆ ನಾನೂ, ಎದುರಲಿ ಕಾಣುತಿರುವಾಗ ನೀನು |೨|

ನಿನ್ನ ಕಿರುಬೆರಳ ತುಟಿಯಲಿ ಕುಣಿಸು ನನ್ನ,
ಸಣ್ಣ ಪರಿಮಳವ ಉಸಿರಲಿ ಬೆರೆಸೋ ಚಿನ್ನ,
ನೀನು ತೊಟ್ಟಿರುವ ಉಡುಪಿಗೂ ಎಷ್ಟು ಜಂಬ ,
ನೀನು ಸಿಗದಿರಲು ಅಲೆಯುವೆ ಊರ ತುಂಬಾ,
ಪ್ರೀತಿಯ ಅವತಾರ ನೂರು.. ತೋರುತ ನೀ ಸನಿಹ ಕೂರು..
ಈ ಜೀವದ ಕಾಳಜಿ ನೀನು..!

ಕಾಣೆಯಾಗಿರುವೆ ನಾನೂ, ಎದುರಲಿ ಕಾಣುತಿರುವಾಗ ನೀನು..

ನಿನ್ನ ನೆನಪುಗಳೇ ಮನಸಿಗೆ ಪಾರಿಜಾತ,
ದಿವ್ಯ ನಸುನಗುವೇ ಕನಸಿನ ಜಾಹೀರಾತ,
ನೀನು ಕರೆದರೆ ನಾ ಬರುವೆನು ಹಾಗೇನಿಲ್ಲ.
ನಿನ್ನ ಜೊತೆಗಿರುವ ಕ್ಷಣಗಳೇ ಜೋನಿಬೆಲ್ಲ.
ವಾಸಿಸು ಕನಸಲ್ಲಿ ಬಂದು, ಪ್ರೀತಿಸು ಹೃದಯಾನೇ ನಿಂದು,
ನೀನಿಲ್ಲದೆ ತಬ್ಬಲಿ ನಾನೂ..!

ಕಾಣೆಯಾಗಿರುವೆ ನಾನೂ, ಎದುರಲಿ ಕಾಣುತಿರುವಾಗ ನೀನು.. |೨|

Saturday, November 30, 2019

Odeya hey odeya lyrics/ಹೇಯ್ ಒಡೆಯ ಸಾಹಿತ್ಯ




ಚಿತ್ರ       : ಒಡೆಯ
ಸಂಗೀತ : ಅರ್ಜುನ ಜನ್ಯ
ಸಾಹಿತ್ಯ : ಡಾ. ವಿ . ನಾಗೇಂದ್ರ ಪ್ರಸಾದ್

ಸಾಹಿತ್ಯ :

ಹೇಯ್ ಒಡೆಯ! ಬಾ ಒಡೆಯ..!
ಸಿಡಿಲಿವನು ದಾರಿ ಬಿಡಿ, ಗುಡುಗು ಇವನು ನೀ ದೂರ ನಡಿ!
ಭಯವಾದರೆ ಊರು ಬಿಡಿ ಬಂದಿದೆ ಬೆಂಕಿ ಕಿಡಿ!
ಹೇಯ್ ಒಡೆಯ! ಬಾ ಒಡೆಯ..
ಅಸ್ತ್ರಗಳ ಕೆಳಗೆ ಇಡಿ, ಅಡ್ ಬಿದ್ದು ನೀ ದಂಡ ಹೊಡಿ!
ನಡುಕಾನ ನೀರು ಕುಡಿ ಇವನ ನೆರಳು ಪಡಿ!
ಆಣೆ ಇಟ್ಟಾಗ, ಮಾತು ಕೊಟ್ಟಾಗ ದೇಹಿ ಅನ್ನೋರ
ಕಾಯುವವನ ನೋಡಿ...!
ಹೇಯ್ ಒಡೆಯ! ಬಾ ಒಡೆಯ..!
ಕೂಸು ಹುಟ್ಟಿದಾಗ ಇವನ ಹೆಸರೇ ಇಡುವರಿಲ್ಲಿ!
ಇವನ ಮಾತೆ ಅಂತ್ಯ ನಮ್ಮ ಊರಲಿ..
ಒಹ್ ಹೋ ಮಚ್ಚು ಕೂಡ ಹುಚ್ಚ್ ಆಗೋಯ್ತು, ಬೀಸೋ ವೇಗದಲ್ಲಿ!
ನೋಡೋ ಉರಿಯೋ ಸೂರ್ಯ ಅಡಗಿ ಕುಂತ ಕಣ್ಣಲಿ!
ನಡೆಯೋ ಕೊಡಲಿ, ಇವ ಎತ್ ಎತ್ ಒಗೆದರೆ ನರಕ ಕಣೋ..
ಇವನು ಬಿಜಲಿ ನವ ನಕ್ಷತ್ರ ಕಣೋ!
ಆಣೆಯ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ ಕಾಯುವವನ ನೋಡಿ!
ಹೇಯ್ ಒಡೆಯ! ಬಾ ಒಡೆಯ..
ಹೇಯ್ ಒಡೆಯ! ಬಾ ಒಡೆಯ..
ಹೇಯ್ ಒಡೆಯ!
ಹುಟ್ಟಿದಂತ ಊರ ಮಣ್ಣ ಗಾಟ್ಟು ಕೋಪದಲ್ಲಿ
ಸತ್ಯ ಧರ್ಮಕಾಗೆ, ನಿಲ್ಲೋ ರಣಕಲಿ!
ಬುದ್ದಿವಾದ ಹೇಳೋನಲ್ಲ, ಬಾಯಿ ಮಾತಿನಲ್ಲಿ..
ಯಾರು ಎದ್ದೆ ಇಲ್ಲ ಇವನು ಕೊಟ್ಟ ಏಟಲಿ!
ನಡಯೋ ಶಿಖರ, ಇವ ಗುಂಪಲ್ ನಡೆದರೂ ಹುಲಿಯ ತರ!
ಇವನು ಚತುರ, ಇವ ಸಿಂಪಲ್ ನೇಸರ!
ಆಣೆ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ ಕಾಯುವವನ ನೋಡಿ!
ಹೇಯ್ ಒಡೆಯ! ಬಾ ಒಡೆಯ..
ಹೇಯ್ ಒಡೆಯ! ಬಾ ಒಡೆಯ..
ಹೇಯ್ ಒಡೆಯ!