Friday, August 18, 2017

Kere Yeri Song Lyrics Mugulu Nage

ಚಿತ್ರ : ಮುಗುಳು ನಗೆ (2017)
ನಿರ್ದೇಶಕರುಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ
ಸಾಹಿತ್ಯ : ಯೋಗರಾಜ್ ಭಟ್
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ..

ಯಾರ್ ಬಿತ್ತಿಲ್ಲ ಬೆಳೆದಿಲ್ಲ ಎದೆ ತುಂಬಾ ಅರಳ್ಯಾವೇ ಕಿಡಿಗೇಡಿ ಕೆಂದಾವರೆ..
ನಾವ ಕನಸಲ್ಲಿ ಹೆಂಗಪ್ಪಾ ಆರಾಮಾಗಿರಬೇಕು ಹಗಲಹೊತ್ತೆ ಹಿಂಗ್ ಆದರೆ..

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ..

ಹಿoಗೆ ಹಿಂದೊಮ್ಮೆ ಎಂದೋ ನಡೆದಂತೆ ಸುತ-ಮುತ್ತ ಮರೆತು ಕುಂತೆ..
ಹೊಂಗೆ ಮರದಲ್ಲಿ ಹೆಸರು ಕೆತ್ತಿದ್ದು ಮತ್ತೆ-ಮತ್ತೆ ನೆನಪಾದಂತೆ..

ಮನದ ಗುಡಿಯಲ್ಲಿ ಹಚ್ಚಿಕೊಂಡಿರುವ ಒಂದು ಎರಡು ಮೂರು ಹಣತೆ...
ಬಿರುಗಾಳಿ ಮುಂದೆ ಬೊಗಸೆ ಸಾಲಲ್ಲ ಅನ್ನೋದನ್ನೇ ನಾನು ಮರೆತೇ..

ಎರಡು ರೇಖೆ ಸಾಲೋದಿಲ್ಲ ಅಂತನಿಸಿ ಎಳಕೊಂಡೆ ಹಣೆಮೇಲೆ ಮೂರನೇ ಗೆರೆ..
ಈ ಬದುಕಲ್ಲಿ ಯಾವನೂ ಆರಾಮಾಗಿರಲಾರ ಹಳೆ ನೆನಪೇ ನಿಂತೋದರೆ...

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ..

ತುಂಬಾ ಅನಿಸುವದು ನನ್ನಂಥ ನನಗೂ ಪ್ರೀತಿ ಇನ್ನೂ ಗೊತ್ತಾಗಿಲ್ಲ..
ಹಾಂಗಾಗಿ ನಾನು ನನ್ನ ಜೊತೆಗೇನೆ ಜಾಸ್ತಿ ಏನು ಮಾತಾಡಲ್ಲ..

ಒಂದು ಸರಿಯಾದ ದುಃಖ ಇರದಿದ್ರೆ ಕಣ್ಣು ಕೂಡ ತುಂಬೋದಿಲ್ಲ..
ತುಂಬಾ ಪ್ರೀತಿಸುವೆ ತುಂಟುತನವನ್ನೂ ಗಾಂಭೀರ್ಯವೇ ನನಗಾಗಲ್ಲ..

ಯಾವ ಕನಸಲ್ಲೂ ನಾನಂತೂ ಯಾವತ್ತೂ ನೋಡಿಲ್ಲ ಯಾರ್ ಮೇಲೂ ಬಟ್ಟೆ ಬರೇ..
ನಾ ಅನಿಸಿದ್ದು ಹೇಳಿರುವೆ ನನ್ನ ಹುಡುಗೀರೆ ಕ್ಷಮಿಸಿ ನೀವೆಲ್ಲ ಸಿಟ್ಟಾದರೆ..

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ..

Ninna Snehadinda Mugulu nage song Lyrics

ನಿರ್ದೇಶನ: ಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ
ಸಾಹಿತ್ಯ : ಯೋಗರಾಜ್ ಭಟ್
ಗಾಯನ : ಶ್ರೇಯ ಘೋಷಾಲ್

ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ನಿಂಗೆ ಧನ್ಯವಾದ.. ತುಂಬು ಹೃದಯದಿಂದ...

ಮನದಲೊಂದು ಮಧುರ ಮೈತ್ರಿ ಜೀವ ಪಡೆಯುತಿದೆ...
ಪ್ರತಿಬಿಂಬವೂ ಪ್ರೇಮದಾ ಹೂವು ಮುಡಿಯುತಿದೆ..

ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ನಿಂಗೆ ಧನ್ಯವಾದ.. ತುಂಬು ಹೃದಯದಿಂದ...

ತುಂಬಾ ಸನಿಹದಲ್ಲಿ ತುಂಟ ದನಿಯಲ್ಲಿ ಹುಸಿ ಕೋಪವ ಕಲಿಸು ತುಸು ನಾಚಿಕೆ ಬಿಡಿಸು..
ಕುಂತ ಜಾಗದಲ್ಲಿ ಕುಂಟು ನೆಪ ಹೇಳಿ ಕಿರುಬೆರಳು ನೇವರಿಸು ಒಂದೆನಿತು ಆವರಿಸು..
ಸರಳವಾದ ಸರಸವನ್ನು ಆಧರ ಬಯಸುತಿದೆ, ನಿನ್ನಿಂದಲೇ ರಸಿಕತೆ ಉದಯವಾಗುತಿದೆ..

ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ಒಂದೇ ಕಣ್ಣಿನಿಂದ ನಿಂಗೆ ಧನ್ಯವಾದ..

ಆ..ssss

ನೀನೆ ಹೇಳು ನೀನೆ ಹೇಳು..
ಸತಾಯಿಸುವ ಆಸೆಗಳನ್ನು ಹೇಗೆ ಹೇಳಲಿ ನಾ..?
ಅಂದಗಾರ ನಿನ್ನ ನೋಡಿ ನಿಧಾನಿಸಲು ಸಧ್ಯವಿಲ್ಲಾ ಏನು ಮಾಡಲಿ ನಾ..?
ನೀ ನೆನೆಯುವ ಮಳೆಯಲಿ ನನಗು ಪಾಲು ಇದೆ..
ನಿನ್ನ ಪ್ರೀತಿಯ ಶೀತವು ಪ್ರಾಣ ಉಳಿಸುತಿದೆ..

ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ಒಳ್ಳೆ ರೀತಿಯಿಂದ ನಿಂಗೆ ಧನ್ಯವಾದ...

Roopasi Summane Mugulu Nage Lyrics

ನಿರ್ದೇಶನ: ಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ
ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

ಇಶಾರೆಯ ನೀ ನೀಡೂ ಹುಷಾರಾಗುವೆ..
ನನಗಾಗುವ ಕನಸೆಲ್ಲವೂ ಬರಿ ಇಂಥವೇ..

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

ನಾಚಿವೆ ನಿನ್ನನು ನೋಡಿ ಹೂವಿನ ಅಂಗಡಿ...
ಮೆಲ್ಲಗೆ ಕಣ್ಣಲೇ ಗೀಚು ಮುತ್ತಿನ ಮುನ್ನುಡಿ...
ಮಂದಹಾಸವೇ ನನ್ನ ಆಸ್ತಿಯು.. ಈಗ ನಿನ್ನ ಪಾಲು..
ತಮಾಷೆಗೂ ಕೈ ಚಾಚು ತಯಾರಾಗುವೆ...
ಬಡಪಾಯಿಯ ಮನರಂಜನೆ ಬರೀ ಇಂಥದೇ...

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

ನಿನ್ನನು ಕಾಣುವ ಜಾಗ ಖಾಸಗಿ ಸ್ಮಾರಕ...
ನನ್ನನು ಆಪ್ತನೂ ಎಂದು ಮಾಡಿಕೊ ನೇಮಕ..
ಎಲ್ಲೇ ಎಸೆದರು ನಿನ್ನ ಕಣ್ಣಲೇ ಬಂದು ಬೀಳುವಾಸೆ..
ನಿನ್ನಾ ಜೀವದಲ್ಲೀಗ ಜಮಾ ಆಗುವೆ...
ನಡು ಬೀದಿಯ ಜ್ನ್ಯಾನೋದಯ ಬರೀ ಇಂಥವೇ...

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

Kannadi Illada Oorinali Mugulu Nage Lyrics

ನಿರ್ದೇಶನ: ಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ

ಕನ್ನಡಿ ಇಲದ ಊರಿನಲಿ ಕಣ್ಣಿಗೆ ಬಿದ್ದವ ನೀನು...
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು...

ಕುತೂಹಲ ಒಂದಲ್ಲ ನೂರಾರಿವೆ..
ತಲುಪಿಲ್ಲದ ಕರೆ ಎಲ್ಲವೂ ನಿಂದೆ ಅಲ್ಲವೇ..

ಕನ್ನಡಿ ಇಲ್ಲದ ಊರಿನಲ್ಲಿ ಕಣ್ಣಿಗೆ ಬಿದ್ದವ ನೀನು..
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು...

ಸೇರಿಸು ನನ್ನನು ನಿನ್ನ ಭಾವನಾ ವಲಯಕೆ..
ಬೇಡಿಕೆ ಬಂದಿದೆ ನೋಡು ಬೇಯುವ ಹೃದಯಕೆ..

ನನ್ನ ಸ್ವಪ್ನದ ಬೀದಿಯಲ್ಲಿಯ ಜಾಹೀರಾತು ನೀನು..
ಸಮೀಪಿಸು ನಿನ್ನಿಂದ ಬಚಾವಾಗುವೆ..
ಶುರುವಾತಲ್ಲಿ ಕಿರು ಸಾಹಸ ಚಂದ ಅಲ್ಲವೇ..

ಕನ್ನಡಿ ಇಲ್ಲದ ಊರಿನಲ್ಲಿ ಕಣ್ಣಿಗೆ ಬಿದ್ದವ ನೀನು..
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು...

ಕಾಯಿಸೋ ಆಟವು ಕೂಡ ಪ್ರೇಮಿಯ ಲಕ್ಷಣ..
ಆಗಿದೆ ದೂರವೇ ನಿಂತು ನಲ್ಮೆಯ ಉಲ್ಬಣ..
ಮುತ್ತಿನಂತಹ ಮಾತು ಸಾಲದು ಮುತ್ತೇ ನೀಡು ಬೇಗ..

ಎಲ್ಲ ಬಾಕಿ ಒಂದೊಂದೇ ಚುಕ್ತಾ ಮಾಡುವೆ..
ಅನುರಾಗದ ಅನುವಾದವು ಕಷ್ಟ ಅಲ್ಲವೇ...

ಕನ್ನಡಿ ಇಲ್ಲದ ಊರಿನಲ್ಲಿ ಕಣ್ಣಿಗೆ ಬಿದ್ದವ ನೀನು..
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು...

Saturday, August 12, 2017

Hodi Ombath Mugulnage Lyrics/ ಮುಗುಳ್ನಗೆ ಹೊಡಿ ಒಂಬತ್..!!

ನಿರ್ದೇಶನ: ಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ
ಯೌವ್ವನ ಒಂದು ಟಾಂಗಾ ಗಾಡಿ ಕುದುರೆ ಕಣ್ಣು ಕಾಣಲಿ ಬಿಡ್ಲಿ ಹೊಡಿ ಒಂಬತ್...!!! ಹೊಡಿ ಒಂಬತ್...!
ಮಂಗನಿಂದ ಮಾನವನಾದ ಮಂಗನ ಬಾಲ ಚೆನ್ನಾಗಿರ್ಲಿ ಹೊಡಿ ಒಂಬತ್...!!! ಹೊಡಿ ಒಂಬತ್...!

ಕೆಟ್ಟು ಕುಂತಾಗ ಕತ್ತೇನು ವೇದಾಂತಿ, ಬುದ್ಧಿವಂತ ನೀನು ಈ ಮಾತಿಗೇನಂತಿ..??
ಫೇಲ್ ಆದವ್ನೆ ಪಾಸ್ ಆಗೋದು ಹೊಡಿ ಒಂಬತ್...!!!
ಅದ್ನ ತಿಳ್ಕೊಂಡವ್ನೆ ಮೇಷ್ಟ್ರಾಗೋದು ಹೊಡಿ ಒಂಬತ್..!!! ಹೊಡಿ ಒಂಬತ್..!!! ಹೊಡಿ ಒಂಬತ್..!!!

ಹೊಡಿ ಒಂಬತ್..!!!ಹೊಡಿ ಒಂಬತ್..!!!ಹೊಡಿ ಒಂಬತ್..!!!ಹೊಡಿ ಒಂಬತ್..!!!!!!!!

ಸ ರೇ ಗ ಮ ವೇಕೆ ಸರಿ ರಾತ್ರಿಲಿ ಉಕ್ಕಿ ಬರೋದು..?
ಸುರಕೊಂಡಾಗ್ಲೇ ಹೃದಯಕ್ಕ್ಯಾಕೆ ಸೊಕ್ಕು ಬರೋದು..??

ಈ ರಸ್ತೆಗೆ ನಾವ್ ಬರೋದು ಮೊದಲೇ ಗೊತ್ತಿರಬೋದು..!
ಅದ್ಯಾವ್ದೋ ಊರ ಆಸ್ಪತ್ರೆಲ್ ನಮ್ಮಪ್ಪ ಹುಟ್ಟಿರ್ಬೋದು..!

ಇಷ್ಟು ದೊಡ್ಡ ಬ್ರಹ್ಮಾಂಡ ಬೇಕಾ ನಿಮಗೆ ಹೇಳಿ ಚೂರು ಎಲ್ಲ ತಿಳ್ಕೊಂಡೋರು..!!
ಇಷ್ಟ ಪಟ್ಟ ಹುಡುಗೀರ ಲಿಸ್ಟಿನೊಳಗೆ!! ಬೆಸ್ಟು ಯಾರೂ ಬಿಟ್ಟು ಹೋದೋರ್ಯಾರೋ..?

ನಂಬಕೊಂಡಿದ್ದೆ ಚಂಬಾಗೋದು ಹೊಡಿ ಒಂಬತ್..!
ಅದಕೆ ವರ್ಷಕ್ಕೊಂದು ಲವ್ ಆಗೋದು ಹೊಡಿ ಒಂಬತ್..!! ಹೊಡಿ ಒಂಬತ್..!! ಹೊಡಿ ಒಂಬತ್..!!

ಹೊಡಿ ಒಂಬತ್..!!ಹೊಡಿ ಒಂಬತ್..!!ಹೊಡಿ ಒಂಬತ್..!!ಹೊಡಿ ಒಂಬತ್..!!

ತಲೆ ಕೆಟ್ಟಾಗ ತಲೆ ಕೂದಲನ್ನ ಬಯ್ಯೋಕಾಗತ್ತಾ..???
ತಳ ಸುಟ್ಟೋನು ಬೆಂಕಿ ಪೆಟ್ಟಿಗೆನ ನಂಬಕ್ಕಾಗತ್ತಾ..?

ಅಂದಕೊಂಡಂಗ ಆಗ್ಗಿ ಬಿಟ್ಟರೆ ದೇವ್ರಿಗಿಲ್ಲ ಕೆಲಸ..
ಪ್ರೀತ್ಸಿದ್ದೆ ಪಕ್ಕದಲ್ಲಿದ್ದರೆ ದೇವರಾಗ್ತಿದ್ದ ಮನುಷ್ಯ..

ನಮ್ಮದಾಗಿದ್ರು ನಮ್ಮದಲ್ಲ ಬೇರೆ ಯಾರದೋ ಈ ಎದೆಯ ಗೂಡು ನಮ್ದು ಬಾಡಿಗೆ ಹಾಡು..
ಸಿಂಗಲ್ ಆಗಿ ಹೊಂಗನಸನ್ನಾ ಹೆಂಗೆ ಕಂಡರೂ ನಾಯಿ ಪಾಡು ಎಲ್ಲ ಸ್ಯಾಡು ಸ್ಯಾಡು..

ಗೊತ್ತಿದ್ದೊನೆ ತಪ್ಪ್ ಮಾಡೋದು ಹೊಡಿ ಒಂಬತ್..!!!
ಅದಕ್ಕೆ ಮಂದೀವ್ ಮದವಿ ಮಾಡ್ಕೊಳ್ಳೋದು ಹೊಡಿ ಒಂಬತ್..! ಹೊಡಿ ಒಂಬತ್!! ಹೊಡಿ ಒಂಬತ್..!!!

ಹೊಡಿ ಒಂಬತ್..!!ಹೊಡಿ ಒಂಬತ್..!!ಹೊಡಿ ಒಂಬತ್..!!ಹೊಡಿ ಒಂಬತ್..!!