Monday, October 2, 2017

Sanje Hothu song Lyrick Tarak kannada Lyrics


ಚಿತ್ರ : ತಾರಕ್


ಸಂಜೆ ಹೊತ್ತು ನಿನ್ನ ಶ್ಯಾನೆ ನೋಡ್ತಾ ಇದ್ರೆ ಎರ್ರಾss ಬಿರ್ರಿss ಲವ್ ಆಯ್ತದೆ...
ಕಾಲರ್ ಎತ್ಕೊಂಡ್ ನೀನು ಕೂಲ್ ಆಗ್ ಹೋಯ್ತಾ ಇದ್ರೆ ನಂದೇ ದೃಷ್ಟಿ ತಾಗೋಯ್ತದೆ..

ಸ್ವರ ರಾಗ ಸೋದರ...
ರಸಾಯುತಾ aaaaaa
ಸ್ವರ ರಾಗ...aaaa
ಅತ್ತೆ ಮೇಲೆ ಮಾವನ ಮೇಲೆ ಅಮ್ಮನ ಮೇಲೆ ಅಪ್ಪನ ಮೇಲೆ ಎಲ್ಲರ ಮೇಲೆ ಆಣೆ ಚಿನ್ನ I Love you...
ವಾಲೆ ಮೇಲೆ ಜುಮ್ಕಿ ಮೇಲೆ ಡಾಬಿನ್ ಮೇಲೆ ಗೆಜ್ಜೆ ಮೇಲೆ ಯಾರ ಮೇಲು ಆಸೆ ಇಲ್ಲ I Want you..

ಚೆಂದುಳ್ಳಿ ಚಿನಕುರಳಿ ನನ್ನ ಮುದ್ದು ಆಣೆ ಪಟಾಕಿ
ಹಿತ್ತಲಲ್ಲಿ ಕಾಯ್ತಿನಿ ಹೋಗು ಒಂದು ಮುತ್ತು ಬಿಸಾಕಿ,
ಬಿಡದೆ ಸೆಳೆಯೋ ಗೆಳೆಯಾ...
ಆ....

ಸಂಜೆ ಹೊತ್ತು ನಿನ್ನ ಶ್ಯಾನೆ ನೋಡ್ತಾ ಇದ್ರೆ ಎರ್ರಾss ಬಿರ್ರಿss ಲವ್ ಆಯ್ತದೆ...
ಸ್ವರ ರಾಗ ಸೋದರ...
ರಸಾಯುತಾ aaaaaa
ಸ್ವರ ರಾಗ...aaaa

ಮದರಂಗಿ ನೀನೆ ಮನದಾಳ ನೀನೆ, ನನ್ನ ಆಳೋ ರಾಣಿ ನೀನೆ...
ಮುಂಜಾನೆ ಇಂದಾ ಮುಸ್ಸಂಜೆ ವರೆಗೂ ನಿಂದೇನೆ ಧ್ಯಾನ,
ನೀನಂದ್ರೆ ಪ್ರಾಣ
ನೀನು ಅಂದ್ರೆ ಇಷ್ಟ ನಂಗೆ ನಿನ್ನ ಕಂಡ್ರೆ ಜೀವ ನಂಗೆ,
ಹರಕೆನಾದ್ರೂ ಹೊತ್ತುಕೋತಿನಿ ಹೆಂಗೋ ನಿನ್ನ ಪಡ್ಕೋತೀನಿ..

ಸಂಜೆ ಹೊತ್ತು ನಿನ್ನ ಶ್ಯಾನೆ ನೋಡ್ತಾ ಇದ್ರೆ ಎರ್ರಾss ಬಿರ್ರಿss ಲವ್ ಆಯ್ತದೆ...
ಸ್ವರ ರಾಗ ಸೋದರ...
ರಸಾಯುತಾ aaaaaa
ಸ್ವರ ರಾಗ...aaaa 

Birugaliyondige Kannada song Lyrics Tarak kannada Song


ಚಿತ್ರ : ತಾರಕ್
ಗಾಯನ : ಅರ್ಮಾನ್ ಮಲಿಕ್.



ಬಿರುಗಾಳಿಯೊಂದಿಗೆ ಕಿರು ದೀಪ ಹೇಳಿದೆ ನೀನಾಗು ನನ್ನಯ ಸಂಜೀವಿನಿ...
ಇರುವಷ್ಟು ಜೀವನ ಒಲವಿಂದ ತುಂಬುತ ಮಾಯಾವಿಯೇ...
ಮಾತಾಡು ನೀ...

ಬಿರುಗಾಳಿಯೊಂದಿಗೆ ಕಿರು ದೀಪ ಹೇಳಿದೆ ನೀನಾಗು ನನ್ನಯ ಸಂಜೀವಿನಿ...

ಬೊಗಸೆಯ ನಡುವೆಯೇ ಅರಳಿ ನಗುವಾಗ ಮುಖಪುಟ,
ಒಳಗಿನ ಹೂ ಹೃದಯದ ವಿವರ ನನಗೀಗ ಪರಿಚಿತ,
ಜೊತೆ ಇದ್ದು ಕೂಡ ಅನಿವಾಸಿ ನೀನು..
ಎಲ್ಲೆಲ್ಲೂ ಮೂಡಿಸಿ ಮುದ್ದಾದ ಮಾರ್ದನಿ ರೂವಾರಿಯೇssss...
ಮಾತಾಡು ನೀ.....

ನಿದಿರೆಯೇ ಬರದಿರು ಎದುರೇ ಸಿಹಿಯಾದ ಕನಸಿದೆ,
ಬದುಕಿನ ಈ ಗುಟುಕಿಗೆ ಎದೆಯ ಗಡಿಯಾರ ಚಲಿಸಿದೆ,
ತುಟಿಯಲ್ಲಿ ನಿನ್ನ ಹಾಡಾಗಿಸೆನ್ನ ನನ್ನಲ್ಲೇ ಇಂಗಲೀ ನಿನ್ನೆಲ್ಲ ಕಂಬನಿ,
ಚೈತನ್ಯವೇssssss ಮಾತಾಡು ನೀ...

ಬಿರುಗಾಳಿಯೊಂದಿಗೆ ಕಿರು ದೀಪ ಹೇಳಿದೆ ನೀನಾಗು ನನ್ನಯ ಸಂಜೀವಿನಿ...

Matadu Nee Hrudayada Mouna Lyrics Tarak Kannada Lyrics


ಚಿತ್ರ : ತಾರಕ್
ಗಾಯನ : ಅರ್ಮಾನ್ ಮಲಿಕ್, ಶ್ರೇಯ ಘೋಷಾಲ್.


ಹ್ಮ್ಮ್ಮ್ಮ್ ಹ್ಮ್ಮ್ಮ್ಮ್ಮ್ ಹೇ ಹೇsss...
ಮಾತಾಡು ನೀ ಹೃದಯದ ಮೌನಾ, ಹೃದಯಕೆ ಸೀದಾ ತಲುಪಿವೆ ಹಾಗೆ....
ಮಾತಾಡು ನೀ ಏನಾದರೂ ...ಮಾತಾಡು ನೀ...

ದೂರವೇ ನಿಂತು ಪ್ರೋತ್ಸಾಹ ನೀಡೋದು ನಿನ್ನ ಕಲೆಗಾರಿಕೆ...
ಕಾಣದಂತೇನೇ ಕಾದಿಟ್ಟ ಈ ಮೋಹ ಬಂತು ಹೊರಗೇತಕೆ..?
ಮಿನು ಮಿನುಗಿದೆ ಕಣ್ಣುಗಳಲ್ಲಿ, ಸವಿಗನಸಿನ ಠೇವಣಿ..
ಹೊಸ ಹುರುಪಲಿ ಬೀಸುತಿರುವ ಗಾಳಿಯೊಡನೆ ಹೂವಿನಂತೆ,
ಮಾತಾಡು ನೀ ಹೇಗಾದರೂ...ಮಾತಾಡು ನೀ...!!!


ಕಂಡ ಮಾತ್ರಕ್ಕೆ ನಾ ಸೋಲಬೇಕಿಲ್ಲ ಚೂರು ಪುಸಲಾಯಿಸು
ಆರದೆ ಇದ್ದ ಪ್ರೀತಿನೇ ಬಲು ಚೆಂದ ದಾಟಿ ಬದಲಾಯಿಸು...
ಉಸಿರಿನ ಒಳಬೀದಿಗಳಲಿ ಪಿಸುನುಡಿಗಳ ಸಂಧನಿ...
ನಸು ಬೆಳಕಲಿ ಮೀಯುತಿರುವ ತೀರದೊಡನೆ ತೆರೆಗಳಂತೆ,

ಮಾತಾಡು ನೀ ಇನ್ನಾದರೂ......, ಮಾತಾಡು ನೀ ಹೃದಯದ ಮೌನ,..
ಹೃದಯಕೆ ಸೀದಾ ತಲುಪುವ ಹಾssssಗೆ, ಮಾತಾಡು ನೀ ಏನಾದರೂ,
ಮಾತಾಡು ನೀ.....

Tuesday, September 5, 2017

Mugulu nage Title Track Lyrics





ಚಿತ್ರ : ಮುಗುಳು ನಗೆ (2017)
ನಿರ್ದೇಶಕರುಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ
ಸಾಹಿತ್ಯ : ಯೋಗರಾಜ್ ಭಟ್
ಗಾಯನ : ಸೋನು ನಿಗಮ್


ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..
ತುಸು ಬಿಡಿಸಿ ಹೇಳು ನನಗೆ, ನನ್ನ ತುಟಿಯೆ ಬೇಕೇ ನಿನಗೆ,
ನನ್ನೆಲ್ಲ ನೋವಿಗೆ ನಗುವೇ ನೀನೇಕೆ ಹೀಗೆ..?

ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..

ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ..!
ಯಾಕಾಗಿ ನೀ ಮರೆಮಾಚುವೆ ನನ್ನೆಲ್ಲ ಭಾವುಕತೆ..!
ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೇ..?
ಅಳುವೊಂದು ಬೇಕು ನನಗೆ ಅರೆ ಗಳಿಗೆ ಹೋಗು ಹೊರಗೆ,
ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೆ..?

ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀನೇಕೆ ಜೊತೆಗಿರುವೆ..?

ಕಣ್ಣಾಲಿಯಾ ಜಲಪಾತವಾ ಬಂಧಿಸಲು ನೀ ಯಾರು..?
ನೀ ಮಾಡುವ ನಗೆ ಪಾಟಲು ಖಂಡಿಸಲು ನಾ ಯಾರು..?
ಸಂತೋಷಕು ಸಂತಾಪಕೂ ಇರಲಿ ಬಿಡು ಒಂದೇ ಬೇರು
ಕಂಗಳಲಿ ಬಂದಾ ಮಳೆಗೆ ಕೊಡೆ ಹಿಡಿವ ಆಸೆಯೇ ನಿನಗೆ..?
ಅತ್ತು ಬಿಡು ನನ್ನ ಜೊತೆಗೆ ನಗಬೇಡ ಹೀಗೆ..

ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..?

Friday, August 18, 2017

Kere Yeri Song Lyrics Mugulu Nage


ಚಿತ್ರ : ಮುಗುಳು ನಗೆ (2017)
ನಿರ್ದೇಶಕರುಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ
ಸಾಹಿತ್ಯ : ಯೋಗರಾಜ್ ಭಟ್
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ..

ಯಾರ್ ಬಿತ್ತಿಲ್ಲ ಬೆಳೆದಿಲ್ಲ ಎದೆ ತುಂಬಾ ಅರಳ್ಯಾವೇ ಕಿಡಿಗೇಡಿ ಕೆಂದಾವರೆ..
ನಾವ ಕನಸಲ್ಲಿ ಹೆಂಗಪ್ಪಾ ಆರಾಮಾಗಿರಬೇಕು ಹಗಲಹೊತ್ತೆ ಹಿಂಗ್ ಆದರೆ..

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ..

ಹಿoಗೆ ಹಿಂದೊಮ್ಮೆ ಎಂದೋ ನಡೆದಂತೆ ಸುತ-ಮುತ್ತ ಮರೆತು ಕುಂತೆ..
ಹೊಂಗೆ ಮರದಲ್ಲಿ ಹೆಸರು ಕೆತ್ತಿದ್ದು ಮತ್ತೆ-ಮತ್ತೆ ನೆನಪಾದಂತೆ..

ಮನದ ಗುಡಿಯಲ್ಲಿ ಹಚ್ಚಿಕೊಂಡಿರುವ ಒಂದು ಎರಡು ಮೂರು ಹಣತೆ...
ಬಿರುಗಾಳಿ ಮುಂದೆ ಬೊಗಸೆ ಸಾಲಲ್ಲ ಅನ್ನೋದನ್ನೇ ನಾನು ಮರೆತೇ..

ಎರಡು ರೇಖೆ ಸಾಲೋದಿಲ್ಲ ಅಂತನಿಸಿ ಎಳಕೊಂಡೆ ಹಣೆಮೇಲೆ ಮೂರನೇ ಗೆರೆ..
ಈ ಬದುಕಲ್ಲಿ ಯಾವನೂ ಆರಾಮಾಗಿರಲಾರ ಹಳೆ ನೆನಪೇ ನಿಂತೋದರೆ...

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ..

ತುಂಬಾ ಅನಿಸುವದು ನನ್ನಂಥ ನನಗೂ ಪ್ರೀತಿ ಇನ್ನೂ ಗೊತ್ತಾಗಿಲ್ಲ..
ಹಾಂಗಾಗಿ ನಾನು ನನ್ನ ಜೊತೆಗೇನೆ ಜಾಸ್ತಿ ಏನು ಮಾತಾಡಲ್ಲ..

ಒಂದು ಸರಿಯಾದ ದುಃಖ ಇರದಿದ್ರೆ ಕಣ್ಣು ಕೂಡ ತುಂಬೋದಿಲ್ಲ..
ತುಂಬಾ ಪ್ರೀತಿಸುವೆ ತುಂಟುತನವನ್ನೂ ಗಾಂಭೀರ್ಯವೇ ನನಗಾಗಲ್ಲ..

ಯಾವ ಕನಸಲ್ಲೂ ನಾನಂತೂ ಯಾವತ್ತೂ ನೋಡಿಲ್ಲ ಯಾರ್ ಮೇಲೂ ಬಟ್ಟೆ ಬರೇ..
ನಾ ಅನಿಸಿದ್ದು ಹೇಳಿರುವೆ ನನ್ನ ಹುಡುಗೀರೆ ಕ್ಷಮಿಸಿ ನೀವೆಲ್ಲ ಸಿಟ್ಟಾದರೆ..

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ..

Ninna Snehadinda Mugulu nage song Lyrics





ನಿರ್ದೇಶನ: ಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ
ಸಾಹಿತ್ಯ : ಯೋಗರಾಜ್ ಭಟ್
ಗಾಯನ : ಶ್ರೇಯ ಘೋಷಾಲ್

ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ನಿಂಗೆ ಧನ್ಯವಾದ.. ತುಂಬು ಹೃದಯದಿಂದ...

ಮನದಲೊಂದು ಮಧುರ ಮೈತ್ರಿ ಜೀವ ಪಡೆಯುತಿದೆ...
ಪ್ರತಿಬಿಂಬವೂ ಪ್ರೇಮದಾ ಹೂವು ಮುಡಿಯುತಿದೆ..

ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ನಿಂಗೆ ಧನ್ಯವಾದ.. ತುಂಬು ಹೃದಯದಿಂದ...

ತುಂಬಾ ಸನಿಹದಲ್ಲಿ ತುಂಟ ದನಿಯಲ್ಲಿ ಹುಸಿ ಕೋಪವ ಕಲಿಸು ತುಸು ನಾಚಿಕೆ ಬಿಡಿಸು..
ಕುಂತ ಜಾಗದಲ್ಲಿ ಕುಂಟು ನೆಪ ಹೇಳಿ ಕಿರುಬೆರಳು ನೇವರಿಸು ಒಂದೆನಿತು ಆವರಿಸು..
ಸರಳವಾದ ಸರಸವನ್ನು ಆಧರ ಬಯಸುತಿದೆ, ನಿನ್ನಿಂದಲೇ ರಸಿಕತೆ ಉದಯವಾಗುತಿದೆ..

ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ಒಂದೇ ಕಣ್ಣಿನಿಂದ ನಿಂಗೆ ಧನ್ಯವಾದ..

ಆ..ssss

ನೀನೆ ಹೇಳು ನೀನೆ ಹೇಳು..
ಸತಾಯಿಸುವ ಆಸೆಗಳನ್ನು ಹೇಗೆ ಹೇಳಲಿ ನಾ..?
ಅಂದಗಾರ ನಿನ್ನ ನೋಡಿ ನಿಧಾನಿಸಲು ಸಧ್ಯವಿಲ್ಲಾ ಏನು ಮಾಡಲಿ ನಾ..?
ನೀ ನೆನೆಯುವ ಮಳೆಯಲಿ ನನಗು ಪಾಲು ಇದೆ..
ನಿನ್ನ ಪ್ರೀತಿಯ ಶೀತವು ಪ್ರಾಣ ಉಳಿಸುತಿದೆ..

ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ...
ಒಳ್ಳೆ ರೀತಿಯಿಂದ ನಿಂಗೆ ಧನ್ಯವಾದ...


Roopasi Summane Mugulu Nage Lyrics





ನಿರ್ದೇಶನ: ಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ
ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

ಇಶಾರೆಯ ನೀ ನೀಡೂ ಹುಷಾರಾಗುವೆ..
ನನಗಾಗುವ ಕನಸೆಲ್ಲವೂ ಬರಿ ಇಂಥವೇ..

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

ನಾಚಿವೆ ನಿನ್ನನು ನೋಡಿ ಹೂವಿನ ಅಂಗಡಿ...
ಮೆಲ್ಲಗೆ ಕಣ್ಣಲೇ ಗೀಚು ಮುತ್ತಿನ ಮುನ್ನುಡಿ...
ಮಂದಹಾಸವೇ ನನ್ನ ಆಸ್ತಿಯು.. ಈಗ ನಿನ್ನ ಪಾಲು..
ತಮಾಷೆಗೂ ಕೈ ಚಾಚು ತಯಾರಾಗುವೆ...
ಬಡಪಾಯಿಯ ಮನರಂಜನೆ ಬರೀ ಇಂಥದೇ...

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

ನಿನ್ನನು ಕಾಣುವ ಜಾಗ ಖಾಸಗಿ ಸ್ಮಾರಕ...
ನನ್ನನು ಆಪ್ತನೂ ಎಂದು ಮಾಡಿಕೊ ನೇಮಕ..
ಎಲ್ಲೇ ಎಸೆದರು ನಿನ್ನ ಕಣ್ಣಲೇ ಬಂದು ಬೀಳುವಾಸೆ..
ನಿನ್ನಾ ಜೀವದಲ್ಲೀಗ ಜಮಾ ಆಗುವೆ...
ನಡು ಬೀದಿಯ ಜ್ನ್ಯಾನೋದಯ ಬರೀ ಇಂಥವೇ...

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

Kannadi Illada Oorinali Mugulu Nage Lyrics



ನಿರ್ದೇಶನ: ಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ

ಕನ್ನಡಿ ಇಲದ ಊರಿನಲಿ ಕಣ್ಣಿಗೆ ಬಿದ್ದವ ನೀನು...
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು...

ಕುತೂಹಲ ಒಂದಲ್ಲ ನೂರಾರಿವೆ..
ತಲುಪಿಲ್ಲದ ಕರೆ ಎಲ್ಲವೂ ನಿಂದೆ ಅಲ್ಲವೇ..

ಕನ್ನಡಿ ಇಲ್ಲದ ಊರಿನಲ್ಲಿ ಕಣ್ಣಿಗೆ ಬಿದ್ದವ ನೀನು..
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು...

ಸೇರಿಸು ನನ್ನನು ನಿನ್ನ ಭಾವನಾ ವಲಯಕೆ..
ಬೇಡಿಕೆ ಬಂದಿದೆ ನೋಡು ಬೇಯುವ ಹೃದಯಕೆ..

ನನ್ನ ಸ್ವಪ್ನದ ಬೀದಿಯಲ್ಲಿಯ ಜಾಹೀರಾತು ನೀನು..
ಸಮೀಪಿಸು ನಿನ್ನಿಂದ ಬಚಾವಾಗುವೆ..
ಶುರುವಾತಲ್ಲಿ ಕಿರು ಸಾಹಸ ಚಂದ ಅಲ್ಲವೇ..

ಕನ್ನಡಿ ಇಲ್ಲದ ಊರಿನಲ್ಲಿ ಕಣ್ಣಿಗೆ ಬಿದ್ದವ ನೀನು..
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು...

ಕಾಯಿಸೋ ಆಟವು ಕೂಡ ಪ್ರೇಮಿಯ ಲಕ್ಷಣ..
ಆಗಿದೆ ದೂರವೇ ನಿಂತು ನಲ್ಮೆಯ ಉಲ್ಬಣ..
ಮುತ್ತಿನಂತಹ ಮಾತು ಸಾಲದು ಮುತ್ತೇ ನೀಡು ಬೇಗ..

ಎಲ್ಲ ಬಾಕಿ ಒಂದೊಂದೇ ಚುಕ್ತಾ ಮಾಡುವೆ..
ಅನುರಾಗದ ಅನುವಾದವು ಕಷ್ಟ ಅಲ್ಲವೇ...

ಕನ್ನಡಿ ಇಲ್ಲದ ಊರಿನಲ್ಲಿ ಕಣ್ಣಿಗೆ ಬಿದ್ದವ ನೀನು..
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು...


Saturday, August 12, 2017

Hodi Ombath Mugulnage Lyrics/ ಮುಗುಳ್ನಗೆ ಹೊಡಿ ಒಂಬತ್..!!


ನಿರ್ದೇಶನ: ಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ
ಯೌವ್ವನ ಒಂದು ಟಾಂಗಾ ಗಾಡಿ ಕುದುರೆ ಕಣ್ಣು ಕಾಣಲಿ ಬಿಡ್ಲಿ ಹೊಡಿ ಒಂಬತ್...!!! ಹೊಡಿ ಒಂಬತ್...!
ಮಂಗನಿಂದ ಮಾನವನಾದ ಮಂಗನ ಬಾಲ ಚೆನ್ನಾಗಿರ್ಲಿ ಹೊಡಿ ಒಂಬತ್...!!! ಹೊಡಿ ಒಂಬತ್...!

ಕೆಟ್ಟು ಕುಂತಾಗ ಕತ್ತೇನು ವೇದಾಂತಿ, ಬುದ್ಧಿವಂತ ನೀನು ಈ ಮಾತಿಗೇನಂತಿ..??
ಫೇಲ್ ಆದವ್ನೆ ಪಾಸ್ ಆಗೋದು ಹೊಡಿ ಒಂಬತ್...!!!
ಅದ್ನ ತಿಳ್ಕೊಂಡವ್ನೆ ಮೇಷ್ಟ್ರಾಗೋದು ಹೊಡಿ ಒಂಬತ್..!!! ಹೊಡಿ ಒಂಬತ್..!!! ಹೊಡಿ ಒಂಬತ್..!!!

ಹೊಡಿ ಒಂಬತ್..!!!ಹೊಡಿ ಒಂಬತ್..!!!ಹೊಡಿ ಒಂಬತ್..!!!ಹೊಡಿ ಒಂಬತ್..!!!!!!!!

ಸ ರೇ ಗ ಮ ವೇಕೆ ಸರಿ ರಾತ್ರಿಲಿ ಉಕ್ಕಿ ಬರೋದು..?
ಸುರಕೊಂಡಾಗ್ಲೇ ಹೃದಯಕ್ಕ್ಯಾಕೆ ಸೊಕ್ಕು ಬರೋದು..??

ಈ ರಸ್ತೆಗೆ ನಾವ್ ಬರೋದು ಮೊದಲೇ ಗೊತ್ತಿರಬೋದು..!
ಅದ್ಯಾವ್ದೋ ಊರ ಆಸ್ಪತ್ರೆಲ್ ನಮ್ಮಪ್ಪ ಹುಟ್ಟಿರ್ಬೋದು..!

ಇಷ್ಟು ದೊಡ್ಡ ಬ್ರಹ್ಮಾಂಡ ಬೇಕಾ ನಿಮಗೆ ಹೇಳಿ ಚೂರು ಎಲ್ಲ ತಿಳ್ಕೊಂಡೋರು..!!
ಇಷ್ಟ ಪಟ್ಟ ಹುಡುಗೀರ ಲಿಸ್ಟಿನೊಳಗೆ!! ಬೆಸ್ಟು ಯಾರೂ ಬಿಟ್ಟು ಹೋದೋರ್ಯಾರೋ..?

ನಂಬಕೊಂಡಿದ್ದೆ ಚಂಬಾಗೋದು ಹೊಡಿ ಒಂಬತ್..!
ಅದಕೆ ವರ್ಷಕ್ಕೊಂದು ಲವ್ ಆಗೋದು ಹೊಡಿ ಒಂಬತ್..!! ಹೊಡಿ ಒಂಬತ್..!! ಹೊಡಿ ಒಂಬತ್..!!

ಹೊಡಿ ಒಂಬತ್..!!ಹೊಡಿ ಒಂಬತ್..!!ಹೊಡಿ ಒಂಬತ್..!!ಹೊಡಿ ಒಂಬತ್..!!

ತಲೆ ಕೆಟ್ಟಾಗ ತಲೆ ಕೂದಲನ್ನ ಬಯ್ಯೋಕಾಗತ್ತಾ..???
ತಳ ಸುಟ್ಟೋನು ಬೆಂಕಿ ಪೆಟ್ಟಿಗೆನ ನಂಬಕ್ಕಾಗತ್ತಾ..?

ಅಂದಕೊಂಡಂಗ ಆಗ್ಗಿ ಬಿಟ್ಟರೆ ದೇವ್ರಿಗಿಲ್ಲ ಕೆಲಸ..
ಪ್ರೀತ್ಸಿದ್ದೆ ಪಕ್ಕದಲ್ಲಿದ್ದರೆ ದೇವರಾಗ್ತಿದ್ದ ಮನುಷ್ಯ..

ನಮ್ಮದಾಗಿದ್ರು ನಮ್ಮದಲ್ಲ ಬೇರೆ ಯಾರದೋ ಈ ಎದೆಯ ಗೂಡು ನಮ್ದು ಬಾಡಿಗೆ ಹಾಡು..
ಸಿಂಗಲ್ ಆಗಿ ಹೊಂಗನಸನ್ನಾ ಹೆಂಗೆ ಕಂಡರೂ ನಾಯಿ ಪಾಡು ಎಲ್ಲ ಸ್ಯಾಡು ಸ್ಯಾಡು..

ಗೊತ್ತಿದ್ದೊನೆ ತಪ್ಪ್ ಮಾಡೋದು ಹೊಡಿ ಒಂಬತ್..!!!
ಅದಕ್ಕೆ ಮಂದೀವ್ ಮದವಿ ಮಾಡ್ಕೊಳ್ಳೋದು ಹೊಡಿ ಒಂಬತ್..! ಹೊಡಿ ಒಂಬತ್!! ಹೊಡಿ ಒಂಬತ್..!!!

ಹೊಡಿ ಒಂಬತ್..!!ಹೊಡಿ ಒಂಬತ್..!!ಹೊಡಿ ಒಂಬತ್..!!ಹೊಡಿ ಒಂಬತ್..!!

Friday, January 13, 2017

Kirik Party Tirboki Jeevana Lyrics



Tirboki Jeevana:

You Are Suspended.......................!!!!

Sir Tirboki Jeevana nammadalla Khali Koothu Bore Aagide,
Baarige Paraari aaguva poraralla Daari Berenu Kaanadaagide,

College na Lastuu Benchu beedige Biddare,
Namgenu illa Swami Avara Keerthigene Tondare,

Garbha Koshadalli Naanu Krishna vaani kelide
Chakravyuva Bhedisodu Ondide,

Rama Setuvena indu naanu Punaha Kattuve,
Kapi Seneyu Nannadondide..!!

Maadaluu Kelasa Nooraaride Saaguva Daari Doora,
Aadare Namage Timellide Kaalave Mosagaaraaa,

Hegala Mele Tooka Bhara vaagideee,
Swalpa Shareuu maadalee.....?

Sir Tirboki Jeevana nammadalla Khali Koothu Bore Aagide,
Baarige Paraari aaguva poraralla Daari Berenu Kaanadaagide,

College na Lastuu Benchu beedige Biddare,
Namgenu illa Swami Avara Keerthigene Tondare,

Kirik Party Belageddu Kannada song Lyrics


Belageddu:

Belageddu Yara mukhava Naanu Nodideee..?
Andaanoo Adrusthano Munde Kuntide,,
Ninne Kanda Kanasu Black n Whituuu Indu Banna Vaagide...
Ninna Mele Kavana Bareyo Gamana Eega taane Moodide...

Kanasalliiii... Arrerrerrerreee...
Bali Bandu Aleeleeleeleee...
Muddaadii Ayyayyayyayyooooo...
Kachaguli Talalare....
Innomme,
Kanasalliiii... Arrerrerrerreee...
Bali Bandu Aleeleeleeleee...
Muddaadii Ayyayyayyayyooooo...
Kachaguli Talalare....


Preetiyalli Hosa daari Kattuva Khayaali,
Adda diddi Hogodu Maamulii...
Sanneyalle Haadondu Haaduva Vidhana Kaadu Kelo Preetine Majaana..
Bidadantirooo Besuge, Sere Sikkiroo Salige...

Ninna Sutta Suliyo Aasegeega Aayas hechi hogide,
Ninna Jote Kaleyo yella Kshanavuu Kalpanegu Meeride...

Kanasalliiii... Arrerrerrerreee...
Bali Bandu Aleeleeleeleee...
Muddaadii Ayyayyayyayyooooo...
Kachaguli Talalare....
Innomme,
Kanasalliiii... Arrerrerrerreee...
Bali Bandu Aleeleeleeleee...
Muddaadi Ayyayyayyayyooooo...
Kachaguli Talalare....

Belageddu Yara mukhava Naanu Nodideee..?
Andaanoo Adrusthano Munde Kuntide,,
Ninne Kanda Kanasu Black n Whituuu Indu Banna Vaagide...
Ninna Mele Kavana Bareyo Gamana Eega taane Moodide...

Kanasalliiii... Arrerrerrerreee...
Bali Bandu Aleeleeleeleee...
Muddaadii Ayyayyayyayyooooo...
Kachaguli Talalare....
Innomme,
Kanasalliiii... Arrerrerrerreee...
Bali Bandu Aleeleeleeleee...
Muddaadii Ayyayyayyayyooooo...
Kachaguli Talalare....