ಚಿತ್ರ : ಮುಗುಳು ನಗೆ (2017)
ನಿರ್ದೇಶನ: ಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು...
ಕುತೂಹಲ ಒಂದಲ್ಲ ನೂರಾರಿವೆ..
ತಲುಪಿಲ್ಲದ ಕರೆ ಎಲ್ಲವೂ ನಿಂದೆ ಅಲ್ಲವೇ..
ಕನ್ನಡಿ ಇಲ್ಲದ ಊರಿನಲ್ಲಿ ಕಣ್ಣಿಗೆ ಬಿದ್ದವ ನೀನು..
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು...
ಸೇರಿಸು ನನ್ನನು ನಿನ್ನ ಭಾವನಾ ವಲಯಕೆ..
ಬೇಡಿಕೆ ಬಂದಿದೆ ನೋಡು ಬೇಯುವ ಹೃದಯಕೆ..
ನನ್ನ ಸ್ವಪ್ನದ ಬೀದಿಯಲ್ಲಿಯ ಜಾಹೀರಾತು ನೀನು..
ಸಮೀಪಿಸು ನಿನ್ನಿಂದ ಬಚಾವಾಗುವೆ..
ಶುರುವಾತಲ್ಲಿ ಕಿರು ಸಾಹಸ ಚಂದ ಅಲ್ಲವೇ..
ಕನ್ನಡಿ ಇಲ್ಲದ ಊರಿನಲ್ಲಿ ಕಣ್ಣಿಗೆ ಬಿದ್ದವ ನೀನು..
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು...
ಕಾಯಿಸೋ ಆಟವು ಕೂಡ ಪ್ರೇಮಿಯ ಲಕ್ಷಣ..
ಆಗಿದೆ ದೂರವೇ ನಿಂತು ನಲ್ಮೆಯ ಉಲ್ಬಣ..
ಮುತ್ತಿನಂತಹ ಮಾತು ಸಾಲದು ಮುತ್ತೇ ನೀಡು ಬೇಗ..
ಎಲ್ಲ ಬಾಕಿ ಒಂದೊಂದೇ ಚುಕ್ತಾ ಮಾಡುವೆ..
ಅನುರಾಗದ ಅನುವಾದವು ಕಷ್ಟ ಅಲ್ಲವೇ...
ಕನ್ನಡಿ ಇಲ್ಲದ ಊರಿನಲ್ಲಿ ಕಣ್ಣಿಗೆ ಬಿದ್ದವ ನೀನು..
ಅಚ್ಚರಿ ಏನಿದೆ ಈ ಕ್ಷಣವೇ ನಿನ್ನವಳಾದರೆ ನಾನು...
Nice lyrics
ReplyDeleteಬೇಡಿಕೆ ಬಂದಿದೆ ನೋಡು ಬೇಯುವ ಹೃದಯಕೆ...
ReplyDelete