ಚಿತ್ರ : ತಾರಕ್
ಗಾಯನ : ಅರ್ಮಾನ್ ಮಲಿಕ್, ಶ್ರೇಯ ಘೋಷಾಲ್.
ಹ್ಮ್ಮ್ಮ್ಮ್ ಹ್ಮ್ಮ್ಮ್ಮ್ಮ್ ಹೇ ಹೇsss...
ಮಾತಾಡು ನೀ ಹೃದಯದ ಮೌನಾ, ಹೃದಯಕೆ ಸೀದಾ ತಲುಪಿವೆ ಹಾಗೆ....
ಮಾತಾಡು ನೀ ಏನಾದರೂ ...ಮಾತಾಡು ನೀ...
ದೂರವೇ ನಿಂತು ಪ್ರೋತ್ಸಾಹ ನೀಡೋದು ನಿನ್ನ ಕಲೆಗಾರಿಕೆ...
ಕಾಣದಂತೇನೇ ಕಾದಿಟ್ಟ ಈ ಮೋಹ ಬಂತು ಹೊರಗೇತಕೆ..?
ಮಿನು ಮಿನುಗಿದೆ ಕಣ್ಣುಗಳಲ್ಲಿ, ಸವಿಗನಸಿನ ಠೇವಣಿ..
ಹೊಸ ಹುರುಪಲಿ ಬೀಸುತಿರುವ ಗಾಳಿಯೊಡನೆ ಹೂವಿನಂತೆ,
ಮಾತಾಡು ನೀ ಹೇಗಾದರೂ...ಮಾತಾಡು ನೀ...!!!
ಕಂಡ ಮಾತ್ರಕ್ಕೆ ನಾ ಸೋಲಬೇಕಿಲ್ಲ ಚೂರು ಪುಸಲಾಯಿಸು
ಆರದೆ ಇದ್ದ ಪ್ರೀತಿನೇ ಬಲು ಚೆಂದ ದಾಟಿ ಬದಲಾಯಿಸು...
ಉಸಿರಿನ ಒಳಬೀದಿಗಳಲಿ ಪಿಸುನುಡಿಗಳ ಸಂಧನಿ...
ನಸು ಬೆಳಕಲಿ ಮೀಯುತಿರುವ ತೀರದೊಡನೆ ತೆರೆಗಳಂತೆ,
ಮಾತಾಡು ನೀ ಇನ್ನಾದರೂ......, ಮಾತಾಡು ನೀ ಹೃದಯದ ಮೌನ,..
ಹೃದಯಕೆ ಸೀದಾ ತಲುಪುವ ಹಾssssಗೆ, ಮಾತಾಡು ನೀ ಏನಾದರೂ,
ಮಾತಾಡು ನೀ.....
No comments:
Post a Comment