ಚಿತ್ರ : ತಾರಕ್
ಗಾಯನ : ಅರ್ಮಾನ್ ಮಲಿಕ್.
ಬಿರುಗಾಳಿಯೊಂದಿಗೆ ಕಿರು ದೀಪ ಹೇಳಿದೆ ನೀನಾಗು ನನ್ನಯ ಸಂಜೀವಿನಿ...
ಇರುವಷ್ಟು ಜೀವನ ಒಲವಿಂದ ತುಂಬುತ ಮಾಯಾವಿಯೇ...
ಮಾತಾಡು ನೀ...
ಬಿರುಗಾಳಿಯೊಂದಿಗೆ ಕಿರು ದೀಪ ಹೇಳಿದೆ ನೀನಾಗು ನನ್ನಯ ಸಂಜೀವಿನಿ...
ಬೊಗಸೆಯ ನಡುವೆಯೇ ಅರಳಿ ನಗುವಾಗ ಮುಖಪುಟ,
ಒಳಗಿನ ಹೂ ಹೃದಯದ ವಿವರ ನನಗೀಗ ಪರಿಚಿತ,
ಜೊತೆ ಇದ್ದು ಕೂಡ ಅನಿವಾಸಿ ನೀನು..
ಎಲ್ಲೆಲ್ಲೂ ಮೂಡಿಸಿ ಮುದ್ದಾದ ಮಾರ್ದನಿ ರೂವಾರಿಯೇssss...
ಮಾತಾಡು ನೀ.....
ನಿದಿರೆಯೇ ಬರದಿರು ಎದುರೇ ಸಿಹಿಯಾದ ಕನಸಿದೆ,
ಬದುಕಿನ ಈ ಗುಟುಕಿಗೆ ಎದೆಯ ಗಡಿಯಾರ ಚಲಿಸಿದೆ,
ತುಟಿಯಲ್ಲಿ ನಿನ್ನ ಹಾಡಾಗಿಸೆನ್ನ ನನ್ನಲ್ಲೇ ಇಂಗಲೀ ನಿನ್ನೆಲ್ಲ ಕಂಬನಿ,
ಚೈತನ್ಯವೇssssss ಮಾತಾಡು ನೀ...
ಬಿರುಗಾಳಿಯೊಂದಿಗೆ ಕಿರು ದೀಪ ಹೇಳಿದೆ ನೀನಾಗು ನನ್ನಯ ಸಂಜೀವಿನಿ...
Impressive post, I love the way lyrics is written. Appreciating your hard work! Please check out my website Panda-Now!, Thank You:)
ReplyDeleteNice post, please check my blog friend AnswerXona!
ReplyDeleteWow very good post dear, this is my blog:) Panda-Now!
ReplyDelete