Sunday, February 11, 2018

Manase Manase PremaBaraha Lyrics



ಚಿತ್ರ : ಪ್ರೇಮಬರಹ


ಮನಸೇ ಮನಸೇ ನೀ ಏಕೆ ಹೀಗೆ ನಗುವೇ...? ನಗುವೇ ನಗುವೇ...
ನೀ ಏಕೆ ಹೀಗೆ ಅಳುವೇ...?

ಎದೆಯಲ್ಲಿ ನೂರು ಕಲಹ ಇದು ನಮ್ಮ ಪ್ರೇಮ ಬರಹ..
ಮನಸೇ ಮನಸೇ ನೀ ಏಕೆ ಹೀಗೆ ನಗುವೇ...? ನಗುವೇ ನಗುವೇ...
ನೀ ಏಕೆ ಹೀಗೆ ಅಳುವೇ...?

ನಾನೆಲ್ಲೋ ಬಂದೆ ನೀನು ಇನ್ನೆಲ್ಲಿಗೆ ಸೆಳೆದೆ
ಮನಸೇ ಮನಸೇ...
ಬೇಡ ಅಂದರೂನು ಇಂಥ ಹಠ ಸರಿಯೇ..?
ಮನಸೇ ಮನಸೇ..

ದೂರದ ಚಂದಿರ ಕಂಡನು ಹತ್ತಿರ..
ನಿನ್ನ ಈ ಕೈಯಿಗೆ ಎಂದೆಂದಿಗೂ ಸಿಗಲಾರದು ಮರುಳೆ..

ಮನಸೇ ಮನಸೇ ನೀ ಏಕೆ ಹೀಗೆ ನಗುವೇ...? ನಗುವೇ ನಗುವೇ...
ನೀ ಏಕೆ ಹೀಗೆ ಅಳುವೇ...?

ಕಣ್ಣಲ್ಲಿ ಎದೆಯಲ್ಲಿ ಈ ಹಂಬಲ ಸರಿಯೇ ಮನಸೇ ಮನಸೇ..!
ಈ ಪ್ರೀತಿ ಈ ಭಾವ ಈ ಆಸೆಯೂ ಕನಸೇ ಮನಸೇ ಮನಸೇ..!

ಪ್ರೇಮದ ಸಾಗರ ಗಾಳಿಯ ಗೋಪುರ
ನನ್ನ ಎದೆಯಾಳದ ಸಿಹಿ ಕನಸನು
ಮೊಗ್ಗಲ್ಲಿಯೇ ಚಿವುಟು ಮನಸೇ ನೀ ಏಕೆ ಹೀಗೆ ನಗುವೇ..?
ನಗುವೇ ನಗುವೇ.. ನೀ ಏಕೆ ಹೀಗೆ ಅಳುವೇ ..?

ಎದೆಯಲ್ಲಿ ನೂರು ಕಲಹ ಇದು ನಮ್ಮ ಪ್ರೇಮ ಬರಹ...!!

No comments:

Post a Comment